Tuesday, July 26, 2011

ಪ್ರೀತಿಯ ಪುಸ್ತಕದ ಮರುಪುಟವಾ ತೆರೆದಾಗ.......


 ಪ್ರೀತಿಯ ಅಮ್ಮು...
ಈ ಜೀವನ ಈಗಲೂ ಕೂಡಾ ಕಳೆದೋಗಿರೋ ಮುತ್ತು.     ಅದು ಮತ್ತೆ ಸಿಕ್ಕಾಗ ಆಗುವ ಸಂತೋಷ ಕೈಯಿಂದ ಕೆಳಗೆ ಬಿದ್ದು ಮಗುವಿನ ಆಟಿಕೆ ಹಿಂತುರುಗಿ ಸಿಕ್ಕಾಗ ಆಗೋ ಸಂತೋಷ.       ಜೀವನದ ಅಮೂಲ್ಯವಾದ ಸೊತ್ತೊಂದು ಕಳೆದು ಕೊಂಡೆನೆಲ್ಲಾ ಎಂಬ ಚಿಂತೆಯೋದಿಗೆ ಕಳಯುತ್ತಿರುವ ಕಾಲವೊಂದಿತ್ತು ಕಣೇ ನನ್ನದು.....
ನೆನೆದರೆ ಎಲ್ಲಿಲ್ಲದ ನೋವು. ನೀ ನನ್ನೀಂದ ಮಿಸ್ ಆದ ಆ ಆರು ತಿಂಗಳು ಹೇಗಿತ್ತೆಂದರೆ ಪ್ರತಿ ಕ್ಷಣ ಜಗತ್ತೆ ಮೋಸ ಎಂಬ ನೆಪದೊಂದಿಗೆ ಯೋಚನೆ ಮಾಡೋ ಸಮಯ. ಯಾವುದನ್ನು ಯಾರೊಂದಿಗೂ ಹೇಳಿಕೊಳ್ಳಲಾರದೆ ಅಲೆದಾಡುತಿದ್ದ ಆ ಸಮಯ.  ಆದರೆ ಆ ನೋವಿಗೆ ಅರ್ಥವೇನು ಎಂಬೂದು ಇಂದಿಗು ವಿಸ್ಮಯ.
ಮಾರ್ಚ ೧೬ ಆಂದು ಯಾರಲ್ಲೂ ಮಾತಿಲ್ಲಾ. ಆದರೆ ನನ್ನ-ನಿನ್ನ ಸ್ನೇಹಕ್ಕೆ ಕೊಟ್ಟ ಪುಲ್ ಸ್ಟಾಪ್  ಮನದಲ್ಲೆ ತಿರುಗುತ್ತಾ ಇತ್ತು. ಅಂದಿನಿಂದಲೆ ನನಗೆ ಹಿತವಾದದ್ದು ಕಣೇ ಈ ಪೆನ್ನು,ಪುಸ್ತಕ, ಪೇಸ್ ಬುಕ್ ನ ಗೆಳೆತನ, ಯಾರಲ್ಲು ಹೇಳಲಾಗದೆ ಉಳಿದ ಮನಸ್ಸಿನ ಮಾತುಗಳು ಈ ಪೆನ್ನು,ಪುಸ್ತಕವನ್ನೆ ಅವಳಂಬಿಸಿದೆ. ಹಾಗೂ ಹೀಗು ನಿನ್ನ ದ್ವನಿ ಕೇಳದೇ ಹೇಗೆ ಕಳೇಯಿತೊ ಇ ಆರು ತಿಂಗಳೂ ನಾನರಿಯನೂ......
ಯಾವ ಸಾದನೇಗು ಕೈ ಹಾಕಲೂ ಸ್ಪೂರ್ತಿ ಇಲ್ಲ. ನೀನಿಲ್ಲದೆ ಉತ್ಸಾಹವನ್ನೆ ಕಳೆದುಕೊಂಡಿದ್ದೆ ಆ ಸಮಯದಲ್ಲಿ. ಆದರೆ ಅಂದೆ ಕೊನೆಯಾದ ಆ ಜಾಗ, ಆ ಸಮಯ ಛೇ ..... ಮರೆಯಲಾರೆನು ಈ ಪುಟವಾ . ನಿನ್ನ ದ್ವನೀ ಕೇಳಿದಾಗ ಮನದ ಜೊತೆ ನಾನು ಕುಣಿದು ಬಿಟ್ಟೆ. ಅಂದು ಮೌನವಾಗಿ ಕೂಳಿತು ಆ ಜಾಗಕ್ಕೆ ತುಳಿದು ಮರುದಿನ ನಿನ್ನ ಮುಖನೊಡಿ ಮಾತನಾಡಲೂ ಹಿಂಜರಿದೆ ಗೇಳತೀ.  ಯಕಂತೀಯಾ? ಅಷ್ಟು ಆಶ್ಚರ್ಯವಾಗಿತ್ತು ನಿನ್ನ ಮರು ಪಯಣ. ನೀ ಜೊತೆಯಿರುವ ಆ ಆರು ತಿಂಗಳ ನಡುವಲ್ಲಿ ಎಲ್ಲವನ್ನು ಮರೆತಿದ್ದೆ. ಇನ್ನ್ಯಾವತ್ತು ಸರಿಹೊಗೋದಿಲ್ಲ ಎಂಬ  ನಿರ್ಧಾರದೊಂದಿಗೆ ಆದರೆ ನೀನೆದರು ಸಿಕ್ಕಿ ಹಾಯ್ ಎಂದಾಗ ಮನಸ್ಸಲ್ಲಿರೋ ಭಯವೇ ಮಾಯವಾಗಿತ್ತು. ಆ ಕ್ಷಣ ಮಾತೆಲ್ಲವೂ ಮರೆತು ಹೋಗಿತ್ತು. ಯಾವುದನ್ನು ಮೊದಲು ಹೇಳಲಿ ಎಂಬ ಚಿಕ್ಕದೊಂದು ಗೊಂದಲ.
ಸಾಕೂ ಗೆಳತಿ ಮರೆಯಲಾರೆನು ಆ ಕ್ಷಣವಾ .
ಜೀವ ಹೋಗೂತ್ತೀರೋ ಸಮಯದಲ್ಲೇ ಕೈಕೊಟ್ಟು ಎದ್ದೇಳಿಸದ ಹಾಗೆ  ಮನಸ್ಸಿನ ಕದತೆರೆದು ಕೂತಿದ್ದ ಸಮಯ ನಿನ್ನ ಬೇಟಿ ಇಷ್ಟು ಹಿತವೇ ? ಮರೆಯಲಾರೆನು ಗೇಳತಿ ನನೀ ಸಿಕ್ಕ ಇ ಕ್ಷಣವಾ, ನನಗಾಗಿ ಕಾತರಿಸಿಟ್ಟ ಇ ಘಳಿಗೇನಾ ?
ಮನೆಸ್ಸೆಂಬ  ಮೂಲೆಯಲ್ಲಿ ಈ ಬಡತನ  ಪರಿಸುದ್ದ ಸ್ನೇಹಕಿಟ್ಟ ಬೆಲೆಯನ್ನಾ..  ತೋರೆಯಲಾರೆನೂ ಈ ಜೀವನದುದ್ದಕ್ಕು ನಿನ್ನ ನಿಷ್ಕಲ್ಮಷ ಸ್ನೇಹಾನಾ . ಕಳೆದುಕೊಳ್ಳಲಾರೆನು ಎಂದಿಗೂ ..  ಮಮತೆ, ಪ್ರೀತಿ-ಸ್ನೇಹ, ನಂಬಿಕೆ ತಂಬಿದ ಈ ಹೃದಯ ವ್ಹಾ..! ನಾನ್ಹೇಗೆ ನೀಡಲಿ ಈ ಧನ್ಯವಾದವಾ ..    ಇನ್ನಾದರು ಕಲಿಸಿಕೊಡು ಈ ಜೀವನವಾ ಜೊತೆಗಿದ್ದು   ಎಕೆಂದರೆ, ಮೊದಲ ಅವಕಾಶವ ನೀ ಕೊಟ್ಟೆ., ಮನಸಿನಲ್ಲಿ ಕಲ್ಲಾಗಿ ಉಳಿದ ಮಾತನ್ನು ವಿವರಿಸಲು. 
                                                                                                              

                                                                                 ನಿನ್ನಪ್ರೀತಿಯ ಗೆಳೆಯ
                                                                                         ಸದಾ......