Sunday, April 10, 2011

ಸುಖ ಕೊಟ್ಟವರ ದು:ಖದ ಕಥೆ.....


ಸುಖ ಇಲ್ಲಿ ಸರಕು. ಉಂಡವರು ತೆಗತಾ ಹೊಗತಾರೆ, ಬಡಿಸಿದವರ ಪಾಲಿಗ ಮಾತ್ರ ಉಳಿಯೊದೆ ದುಖ. ಇಂತಹ ದು:ಖದ ನಡುವಿನಲ್ಲೆ ದಂದೆಗಿಳಿದವರ ಮಕ್ಕಳು ಬೆಳೆಯುತ್ತವೆ, ಬಡತನ ಕೀಳರೀಮೆ ಅವುಗಳ ಪಾಡು.
ಮಕ್ಕಳು ಮಕ್ಕಳೆ ಅವುಗಳ ಸಂಘರ್ಷವೇ ಬೇರೇ. ಬದುಕುನ ಹಿಂದಿನ ಕಟು ಸತ್ಯ ಅವುಗಳಿಗೆ ಬಾಲ್ಯದಲ್ಲೆ ಗೊತ್ತಾಗಬಾರದು. ಚಿಕ್ಕ ಚಿಕ್ಕದಲ್ಲಿ ದೋಡ್ಡ ಭವಿಷ್ಯ ವೆನಿಸುವ ಅವುಗಳದ್ದು ನಿಸ್ಕಲ್ಮಷ ಮನಸ್ಸು. ಆದರೇ ಕೆಂಪು ದೀಪದ ನೆರಳಲ್ಲಿ ಬೇಳೆಯುವ ಇಂತಹ ಮಕ್ಕಳ ಭವಿಷ್ಯ ಎನು?. ಅಮ್ಮ ಸುಖ ಮಾರಲು ಸಿದ್ದಳಾದರೆ, ಆ ಪುಟ್ಟ್‌ ಹುಡುಗಿ ಮಾತ್ರ ಪಾತ್ರೆತೊಳಿತಾಯುರುತ್ತೆ. ಆದೊಂದು ಬದುಕದಿರು ವಯಸ್ಸೇ ಅಲ್ಲಾ.  ಬುಟ್ ಅಮ್ಮನಿಗೆ ಸಾತ್ ನಿಡಲೆಬೇಕೂ, ಕೇಲಸ ಹಂಚಿಹೊಳ್ಳಲೆಬೇಕೂ, ಅದು ಕೆಂಪು ದಿಪದ ಇನ್ನೋಂದು ಮುಖ. ಅದರ ಬದಲಿಗ ಇನ್ನೋಂದು ಮುಖವು ಇದೇ, ಆ ಇನ್ನೋದು ಮುಖ ಬದುಕು ಗೊತ್ತಿಲ್ಲದೆ ಅದೇಷ್ಟೋ ಮಕ್ಕಳು ಕೆಂಪು ದೀಪದಡಿಯಲ್ಲಿ ಕಳೆದು ಹೋಗತಾಇವೆ.....!
   
ಕೆಂಪು ದೀಪದ ಬದುಕೆ ಹಾಗೆ, ಪುಟ್ಟ ಪುಟ್ಟ ಕೋಣೆಯಲ್ಲಿ ಬದುಕು ಅರಳಲೆ ಬೇಕು. ಅಲ್ಲೀಯೇ ಮತ್ತೊಂದು ಮಗುವೋಂದು ನಡೆಯಬೇಕು ಅಲ್ಲಿನ ಪ್ರತಿ ಕೋಣೆಗಳು ನರಕ ಕೂಪಗಳು. ಮಕ್ಕಳು,ಗಂಡ, ಟಿವಿ, ಸಿನೇಮಾ, ಅದೋಂದು ಪುಟ್ಟ ಪ್ರಪಂಚ . ಮಗುವಿನ ಮನಸ್ಸು ಸದಾ ಗಾಳಿ ತೋಡದ ತರಾ, ಹೊರಗೆ ಬಂದು ಹಾರಾಡ ಬಯಸುತ್ತೆ ಆದರೆ ಎನು ಮಾಡೊದು....?
ಕಂದಮ್ಮನ ಕಾಲಿಗೇ ಸರಪಳಿ ಬಿಗಿದು ಅಮ್ಮ ಸಿಖದ ತೇರು ಎಳೇಯಲು ಯೊರಟು ಹೋಗತಾಳೆ, ಅದು ಅವಳಿಗೆ ಅನಿವಾರ್ಯ, ಅದರೇ ಆ ಮಗುವಿನ ಪಾಡೆನು.? ಅಲ್ಲವಾ.!


ಎಷ್ಟೋಸಲ ಪುಟ್ಟಕಂದಮ್ಮಗಳನ್ನು ಬದಿಯಲ್ಲಿಟ್ಟು ಕೋಂಡೆ ಗಿರಾಕಿಗಳಿಗೆ ಕಾಯಬೇಕು. ಅಲ್ಲೇ ಇರುವ ಮಕ್ಕಳ ಪಾಡೇನು? ಅವುಗಳಿಗು ವೋದು ಬದುಕು ಇದೆ ಅಲವಾ? ಅದನ್ನು ಬಗಹರಿಸುವರು ಯಾರು? ಇಂತಹ ಸಮಯದಲ್ಲೆ ಜಾನ ಬ್ರೀಸ್ಕೀ ಅಂತವರು ಬರತಾರೆ ಅವಳು ಅವರ ಪಾಲಿಗೆ ದೇವರೇ ಸರಿ ಯಾಕಂದ್ರೆ ಆ ಮಕ್ಕಳಿಗೆ ನೆಲೆ ಕಿಪಿಸಿದಳು.



ಇಂತಹ ಕೆಂಪು ದೀಪದ ಮಕ್ಕಳ ಕೈಯಲ್ಲಿ ಕ್ಯಾಮರಾ ಕೊಟ್ಟು ಪೋಟೋತಗೆಯುವ ಕಲೆಯನ್ನು ಕಲಿಸಿದರೆ ಹೇಗೆ ಅಂತ ಯೋಚಿಸಿದವಳು ಅಮೆರಿಕಾದ ಪೋಟೋಗ್ರಾಫರ‍್ ಜಾನ್ ಬ್ರಸ್ಕೀ. ಆಕೆ ಕೇಂಪು ದೀಪದಲ್ಲಿದ್ದು ಅಲ್ಲಿನ ಬದುಕನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಳು. ಆಕೆ ಇಂದ ಆ ಕೆಂಪು ದೀಪದ ಮಕ್ಕಳಿಗೆ ಕತ್ತಲೆನಕೂಪದಿಂದ ಮುಕ್ತಿ ಸಿಕ್ಕಿತು ಜಗತ್ತಿನ ಇನ್ನೊಂದು ಮುಖ ಪರಿವಯವಾಯಿತು.



ಆಸೇ ಯಾರಿಗೇ ತಾನೇ ಇಲ್ಲಾ ಹೇಳಿ ಕ್ಯಾಮರಾ ಕೈಯಲ್ಲಿ ಭಮದ ತಕ್ಷಣ ಆ ಪುಟ್ಟ ಹುಡುಗಿ ಪೋಟೋ ತಗೆಯಲು ಸಿದ್ದಳಾದಳು ತಗೆದ ಪೋಟೋಗಳನ್ನು ಮೊಂದಿಟ್ಟು ಕೋಂಡು ಎನು ತಪ್ಪು ಮಾಡಿದ್ದಿರಿ ಅಂತಾ ಬ್ರಿಸ್ಕಿ ಹೃಳಿಕೊಡುತ್ತಿದ್ದಳು ಆ ಮಕ್ಕಳಿಗೆ ಎಂತಹದೊ ಕುಷಿ, ಹಾಕಂದ್ರೇ ಅಲ್ಲಿ ಇನ್ನೋದು ಬದುಕಿನ ಅನಾವರಣ ಇತ್ತು.










ಕೋಪು ದೀಪಗಳಂತಾ ದೇಶಗಳು ನಾನಾ ಕಡೆ ನಾಯಿಕೊಡೆಯಂತೆ  ತೆಲೆ ಎತ್ತುತ್ತಿವೆ. ಕಲ್ಕತ್ತಾಯೋಂದರಲ್ಲೆ ಲಕ್ಷಗಟ್ಟಲೆ ಹೆಣ್ಣುಮಕ್ಕಳು ಮೈ ಮಾರಿಕೊಳ್ಳುತ್ತಾಇದ್ದರೆ ಅಂದ ಮೇಲೇ ಅವರ ಮಕ್ಕಳ ಸಂಖ್ಯ ಯೋಚಿಸಿ....
                                                                                                                      ಸದಾನಂದ........

1 comment:

  1. ನಿಜ ಸದಾ, ಕತ್ತಲಿನ ಇನ್ನೊಂದು ಮುಖ ತುಂಬಾ ವಿಕಾರವಾಗಿದೆ. ಇಲ್ಲಿ ಜರುಗುವುದು ಮಾನವ ಜನಾಂಗದ ಅತೀ ಹೇಯ್ಯ ಕೆಲಸ ಅಂದರೆ ತಪ್ಪಾಗಲ್ಲಾ. ಅಲ್ಲಿ ಅರುಳುವ ಎಲ್ಲ ಮೊಗ್ಗುಗಳನ್ನು ಹೂವಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು, ಅವರಿಗೆ ಒಳ್ಳೆ ಜೀವನ ಕಲ್ಪಿಸಿಕೊಡುವ ಕುರಿತು ಸರ್ಕಾರ ಯೋಚಿಸಬೇಕಾಗಿದೆ. ಆ ಯೋಜನೆಗಳು ಕಾರ್ಯುರೂಪಕ್ಕೆ ಬರುವಂತೆ ನಾಗರಿಕ ಸಮಾಜ ಸ್ಪಂಧಿಸಬೇಕಾಗಿದೆ.

    ReplyDelete